Thursday, 18 November 2021

ಪಂಚಗವ್ಯ - ಆಹಾರ ಭಾಗ್ಯ

 

ಇಂದು ನಾವು ಅನೇಕ ವೈದ್ಯ ಪದ್ಧತಿಗಳು ಪ್ರಚಲಿತವಾಗಿರುವ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ. ಆಯುರ್ವೇದವು ಜಗತ್ತಿಗೆ ಭಾರತದ ಉತ್ಕೃಷ್ಟ  ಕೊಡುಗೆಯಾಗಿದೆ. ದುರಾದಷ್ಟವಶಾತ್ ಅನೇಕ ಕಾರಣಗಳಿಂದ ಆಯುರ್ವೇದಕೆ ಭಾರತದಲ್ಲಿ ಶೋಚನೀಯ ಸ್ಥಿತಿ ಬಂದಿದೆ. ರೋಗಗಳ ಉಪಶಮನ ಕಾರ್ಯದಲ್ಲಿ ಆಯುರ್ವೇದ ಔಷಧಿಗಳ ಪ್ರಭಾವ ಸಾಲದು, ಬಹಳ ನಿಧಾನಕಾರಿ ಮುಂತಾದ ಭ್ರಮೆ ಜನರಲ್ಲಿ ಉಂಟಾಗಿದೆ.

ಆಯುರ್ವೇದವನ್ನು ಅತ್ಯಂತ ಪ್ರಾಮಾಣಿಕತೆಯಿಂದ ಆಳವಾಗಿ ತಿಳಿದುಕೊಂಡು ಯಥೋಕ್ತ ರೀತಿಯಲ್ಲಿ ಚಿಕಿತ್ಸೆ ನೆಡೆಸಿದ್ದೆ ಆದರೆ ಅಸಾದ್ಯ ರೋಗಗಳನ್ನು ಸಹ ಗುಣಪಡಿಸುವುದು ಸಾದ್ಯ. ಅಂತಹ ಶಕ್ತಿ ಆಯುರ್ವೇದಕೆ ಇದೆ.

 


*ಪಂಚಗವ್ಯ* ಚಿಕಿತ್ಸೆ ಆಯುರ್ವೇದ ಚಿಕಿತ್ಸೆಗೆ ಒಂದು ಉತ್ತಮ ಉದಾಹರಣೆ.

 

ಭಾರತೀಯ ಚಿಕಿತ್ಸಾ ಪದ್ಧತಿಗಳಲ್ಲಿ ಎರಡು ಪ್ರಮುಖ ವಿಭಾಗ:

 
1) ಆಯುರ್ವೇದ ಪದ್ಧತಿ 

2) ಸಿದ್ದೌಷದಿ ಪದ್ಧತಿ

ಇವುಗಳಲ್ಲಿ ಆಯುರ್ವೇದ ವಿಶೇಷ ಪ್ರಭಾವಕಾರಿಯಾಗಿದೆ. ಆಯುರ್ವೇದವು ಸ್ವಾಸ್ತ್ಯರಿಗೂ ಅಸ್ವಾಸ್ತ್ಯರಿಗು ಉಪಯುಕ್ತ ಚಿಕಿತ್ಸಾ ವಿಧಾನವಾಗಿದೆ. ಆಯುರ್ವೇದ ಚಿಕಿತ್ಸಾ ಕ್ರಮಗಳಲ್ಲಿ ಬಳಸಲಾಗುವ ಔಷಧಿಗಳು ಮೂರು ವಿಭಾಗ:

 

1) ಪ್ರಾಣಿಜನ್ಯ

2) ಸಸ್ಯಜನ್ಯ

3) ಖನಿಜಗಳು

 

ಆಯುರ್ವೇದ ಶಾಸ್ತ್ರ ಗ್ರಂಥಗಳಲ್ಲಿ ಎಂಟು ಪ್ರಾಣಿಗಳನ್ನು ಉಲ್ಲೇಖಿಸಿ ಚಿಕಿತ್ಸೆಯಲ್ಲಿ ಅವುಗಳ ಉಪಯೋಗವನ್ನು ತಿಳಿಸಲಾಗಿದೆ. ಎಂಟರಲ್ಲಿ  ಹಸುವು ಶ್ರೇಷ್ಠವಾಗಿದೆ. ಹಸುವನ್ನು ಭಾರತೀಯರೆಲ್ಲರೂ ಗೋಮಾತೆ ಎನ್ನುತ್ತಾರೆ. ಹಿಂದೂ ಧರ್ಮಶಾಸ್ತ್ರಗಳಲ್ಲಿ ಹಸುಗಳನ್ನು ಸರ್ವದೇವಾಮಾಯಿ ಎಂದು ಹೇಳಿದ್ದಾರೆ. ಶತಮಾನಗಳ ವಿದೇಶಿ ಆಕ್ರಮಣಕಾರಿಗಳು ನಮ್ಮ ಯಾವ ಶ್ರದ್ದಾ ಅಭಿಮಾನ ಬಿಂದುಗಳನ್ನು ನಾಶಗೊಳಿಸುವ ಸಂಕಲ್ಪ ಮಾಡಿದ್ದರೋ ಅವುಗಳಲ್ಲಿ ಗೋವುಗಳು ಪ್ರಮುಖ ಮಾನ ಬಿಂದುವಾಗಿದ್ದವು. ಆದರೆ ನಮ್ಮ ಸಂಸ್ಕೃತಿಯ ಬೇರು ಎಸ್ಟು ಆಳವಾಗಿ ಬೇರು ನೆಲದೊಳಗೆ ಸೇರಿಕೊಂಡಿವೆ ಅಂದರೆ ನೂರಾರು ವರ್ಷಗಳ ಗುಲಾಮಗಿರಿಯ ಬಳಿಕವೂ ನಮ್ಮ ಮಾನ ಬಿಂದು ಜನಮಾನಸದ ಪರದೆಯಿಂದ ಅಳಿಸಿ ತೆಗೆಯಲು ಆಗದೆ ಹೋಯಿತು.

 

ಆಯುರ್ವೇದ ಶಾಸ್ತ್ರ ಗ್ರಂಥಗಳಲ್ಲಿ ಹಸುಗಳಿಂದ ದೊರೆಯುವ ಹಾಲು, ಮೊಸರು, ತುಪ್ಪ, ಗೋಮೂತ್ರ ಮತ್ತು ಗೋಮಯ - ಐದು ವಸ್ತುಗಳಿಗೆ ಗವ್ಯ ಅನ್ನುತ್ತಾರೆ ಐದು ವಸ್ತುಗಳ ಮಿಶ್ರಣವನ್ನು ಪಂಚಗವ್ಯ ಅನ್ನುತ್ತಾರೆ. ಐದು ದ್ರವ್ಯಗಳ ಪ್ರತ್ಯೇಕ ಗುಣಧರ್ಮ ಹಾಗೂ ಉಪಯೋಗಗಳನ್ನು ಆಯುರ್ವೇದ ಶಾಸ್ತ್ರದಲ್ಲಿ ಅತ್ಯಂತ ವಿಸ್ತಾರವಾಗಿ ತಿಳಿಸಿದ್ದಾರೆ. ಪಂಚಗವ್ಯವನ್ನು ಕೇವಲ ದೇಶೀ ತಳಿಯ ಹಸುಗಳಿಂದ ಪಡೆಯಬೇಕುಹಸುವು ಆರೋಗ್ಯವಾಗಿದ್ದರೆ ಮಾತ್ರ ಅದರ ಪಂಚಗವ್ಯ ಉಪಯುಕ್ತ

 

*ಹಸುವಿನ ಹಾಲು*: ಹಸುವಿನ ಹಾಲು ಇತರ ಪ್ರಾಣಿಗಳ ಹಾಲಿಗಿಂತ ಅತ್ಯುತ್ತಮವಾದದ್ದು. ಶರೀರದ ಪೋಷಣೆಗೆ ಉಪಯುಕ್ತ ಮತ್ತು ಬುದ್ದಿವರ್ದಕ ಹಾಗೂ ಬಲವರ್ದಕ ಆಗಿರುತ್ತದೆ. ಶುಕ್ರವೃಧಿಕಾರಕವು, ಎದೆಹಾಲಿನ ವೃಧಿಗು ಹಾಗೆಯೇ ಮೈಚರ್ಮದ ಕಾಂತಿಗೂ ಹಸುವಿನ ಹಾಲಿನ ಉಪಯೋಗ ಉತ್ತಮ.

 

*ಹಸುವಿನ ಮೊಸರು*: ಹಸುವಿನ ಮೊಸರು ಉದರದ ಅಗ್ನಿಯನ್ನು ಪ್ರದೀಪ್ತಗೊಳಿಸುತ್ತದೆ. ರುಚಿಕರವಾಗಿರುತ್ತದೆ, ಸರಾಗವಾಗಿ ಮಲಮೂತ್ರ ವಿಸರ್ಜನೆ ಆಗುತ್ತದೆ

 

*ಹಸುವಿನ ಮಜ್ಜಿಗೆ*: ಮಜ್ಜಿಗೆಯು ವಾತ, ಪಿತ್ತ ಮತ್ತು ಕಫ ದೋಷಗಳನ್ನು ಉಪಶಮನ ಗೊಳಿಸುತ್ತದೆ. ಕುಡಿಯಲು ರುಚಿಕರವಾಗಿದ್ದು ಹಸಿವನ್ನು ಹೆಚ್ಚಿಸುತ್ತದೆ. ಹೊಟ್ಟೆಗೆ ಸಂಬಂದಿಸಿದ ತೊಂದರೆಗಳಿಗೆ ಉಪಯುಕ್ತವಾಗಿದೆ.

 

*ಮಜ್ಜಿಗೆ ತಯಾರಿಸುವ ವಿಧಾನ*: ಸರಿಯಾಗಿ ಹೆಪ್ಪು ಹಾಕಲ್ಪಟ್ಟ ಒಂದು ಲೀಟರ್ ಮೊಸರನ್ನು ತೆಗೆದುಕೊಂಡು ಕಡೆಗೋಲಿಂದ ಕಡೆಯಿರಿ. ಬಳಿಕ ಅದಕ್ಕೆ ನಾಲ್ಕು ಪಟ್ಟು ನೀರು ಬೆರೆಸಿ ಮತ್ತೆ ಕಡೆಗೋಲಿಂದ ಕಡಿಯಿರಿ. ಬೆಣ್ಣೆ ಬರುವವರೆಗೆ ಕಡೆದು ಮೇಲೆ ಬೆಣ್ಣೆ ಒಟ್ಟು ಸೇರಿದ ಬಳಿಕ ಸ್ವಲ್ಪ ನೀರು ಹಾಕಿ ಪುನಃ ಕಡಿಯಿರಿಬೆಣ್ಣೆ ಸಂಪೂರ್ಣ ಒಟ್ಟಾದ ಮೇಲೆ ಬೆಣ್ಣೆಯನ್ನು ತೆಗೆದು ಬೇರೆ ಪಾತ್ರೆಯಲ್ಲಿ ಇಡಿ. ಈಗ ಉಳಿದಿರುವುದು ಮಜ್ಜಿಗೆ. ಇದರಲ್ಲಿ ಜಿಡ್ಡು ಇರುವುದಿಲ್ಲ.

ಮಜ್ಜಿಗೆ ಸೇವನೆಯ ವಿಧಾನ: 100 ರಿಂದ 250 ಮಿ ಲೀ ಮಜ್ಜಿಗೆಗೆ ಸೈಂಧವ ಉಪ್ಪು, ಜೀರಿಗೆ, ಶುಂಠಿ ರುಚಿಗೆ ತಕ್ಕಂತೆ ಬೆರೆಸಿ ಕುಡಿಯಬೇಕು.

 

*ಹಸುವಿನ ತುಪ್ಪ*: ಹಸುವಿನ ತುಪ್ಪ ಬುದ್ದಿ ಮತ್ತು ನೆನಪಿನ ಶಕ್ತಿಯನ್ನು ವೃದ್ಧಿಸುತ್ತದೆ. ಉದರದ ಅಗ್ನಿಯನ್ನು ಪ್ರದೀಪ್ತ ಗೊಳಿಸುತ್ತದೆ. ದೇಹಬಲವನ್ನು ಹೆಚ್ಚಿಸುತ್ತದೆ, ವೀರ್ಯವರ್ದಕವಾಗಿರುತ್ತದೆ. ಕಣ್ಣಿನ ಕಾಂತಿಯನ್ನು ಹೆಚ್ಚಿಸುತ್ತದೆ. ಎಳೆಯ ಮಕ್ಕಳು ಮತ್ತು ವಯಸ್ಸಾದ ವೃದ್ದರುಗಳಗೆ ಲಾಭವಾಗುತ್ತದೆ. ಮೈ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ

 

*ಗೋಮೂತ್ರ*: ಹಸುವಿನ ಮೂತ್ರವು ಉಳಿದ ಎಲ್ಲಾ ಪ್ರಾಣಿಗಳ ಮೂತ್ರ ಕ್ಕಿಂತ ಶ್ರೇಷ್ಠವೆಂದು ಹೇಳಲಾಗಿದೆ. ಗೂಮುತ್ರವು ಪಾಚಕವೂ (ಜೀರ್ಣಕಾರಕ) ಮತ್ತು ಚರ್ಮರೋಗ ನಾಶಕವೂ ಆಗಿದೆ.

 

*ಗೋಮಯ*: ಹಸುವಿನ ಸಗಣಿಯನ್ನು ಬೆರಣಿ ಮಾಡಿ ನಂತರ ಅದನ್ನು ಸುಟ್ಟು ಬಸ್ಮ ಮಾಡಿ ಔಷಧಿಗಳಿಗೆ ಉಪಯೋಗ ಪಡೆಯಬಹುದು. ವಾತಾವರಣದ ಪರಿಶುದ್ಧತೆಗಾಗಿ ಒಣಗಿದ ಸಗಣಿಯ ಹೊಗೆ ಹಾಕುವುದು, ಮನೆಯನ್ನು ಶುಚಿಗೊಳಿಸಲು, ಕೀಟಾಣುಗಳ ನಾಶಕ್ಕೆ ಮನೆಯ ನೆಲವನ್ನು ಸಾರಿಸಲು ಪ್ರಾಚೀನ ಕಾಲದಿಂದಲೂ ಗೋಮಯ ಉಪಯೋಗವನ್ನು ಪಡೆಯಲಾಗುತ್ತಿದೆ. ಗೋಮಯವು ಸೂರ್ಯಕಿರಣಗಳಲ್ಲಿರುವ ಮಾರಕ ಕಿರಣಗಳಿಂದ ನಮನ್ನು ಸುರಕ್ಷಿತಗೊಳಿಸುತ್ತದೆ.

 

ವಿಜ್ಞಾನವು ಅತ್ಯಂತ ಹೆಚ್ಚಿನ ವೇಗದಲ್ಲಿ ಪ್ರಗತಿಯನ್ನು ಸಾದಿಸುತಿರುವ ಕಾಲಘಟ್ಟದಲ್ಲಿ ಅಷ್ಟೇ ವೇಗವಾಗಿ ಅನೇಕ ರೋಗಗಳು ಇಂದಿನ ಸಮಾಜವನ್ನು ಕಾಡುತಿದೆ. ಬದಲಾಗುತ್ತಿರುವ ನಮ್ಮ ಜೀವನ ಶೈಲಿ ಹಾಗೂ ಅತಿಯಾದ ಶಾರೀರಿಕ ಮತ್ತು ಮಾನಸಿಕ ಒತ್ತಡ ಸಮಸ್ಯೆಗೆ ಪ್ರಮುಖವಾದ ಕಾರಣ. ಪ್ರಾಕೃತಿಕವಾಗಿ ನಮ್ಮ ಸುತ್ತ ಮುತ್ತ ಸಹಜವಾಗಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಮಾಡುವ ಚಿಕಿತ್ಸೆ ಇವತ್ತಿನ ಸಂದರ್ಭದಲ್ಲಿ ಅವಶ್ಯಕ. ಪಂಚಗವ್ಯ ಸೇವನೆ ಹಾಗೂ ಪಂಚಗವ್ಯದಿಂದ ತಯಾರಾದ ಔಷಧಿಗಳ ಉಪಯೋಗ ಹಲವಾರು ಗಂಭೀರ ಸಮಸ್ಯೆಗಳಿಗೆ ಅನುಕೂಲ. ವೈದ್ಯರ ಸಲಹೆಯ ಮೇರೆಗೆ ಔಷಧಿ ಸೇವನೆ ಸೂಕ್ತ.

 

 

ವೈದ್ಯ ಅರವಿಂದ್ ಟಿ ವಿ

ಆಯುರ್ವೇದ ವೈದ್ಯರು

ಸ್ವಾಸ್ತ್ಯ ಆಯುರ್ವೇದ ಹೆಲ್ತ್ ಸೆಂಟರ್

ತುಮಕೂರು

 

No comments:

Post a Comment